Saturday, 20 March 2021

ಗಾದೆಗಳ‌ ವಿಸ್ತರಣೆ


1. ಶಕ್ತಿಗಿಂತ ಯುಕ್ತಿ ಮೇಲು
ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು. ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ.
ಪ್ರಸ್ತುತ ಗಾದೆ 'ಶಕ್ತಿಗಿಂತ ಯುಕ್ತಿ ಮೇಲು' ಎಂಬುದು ಒಂದು ಜನಪ್ರಿಯ ಗಾದೆ. ಶಕ್ತಿ ದೈಹಿಕವಾದದ್ದು. ಯುಕ್ತಿ ಬುದ್ಧಿಚಾತುರ್ಯವನ್ನು ಅವಲಂಬಿಸಿದೆ. ಶಕ್ತಿಯಿಂದ ಗೆಲ್ಲಲಾಗದ ಸಂದರ್ಭದಲ್ಲಿ ಯುಕ್ತಿಯನ್ನು ಪ್ರಯೋಗಿಸಬೇಕು. ತನ್ನ ಜೀವ ಉಳಿಸಿಕೊಳ್ಳಲು ಮೊಲವೊಂದು ಸಿಂಹದಿಂದ ತನ್ನನ್ನು ತಾನು ಯುಕ್ತಿಯಿಂದ ಕಾಪಾಡಿಕೊಂಡ ಪಂಚತಂತ್ರದ ಕಥೆ ಎಲ್ಲರಿಗೂ ತಿಳಿದಿದೆ. ಈ ಹಿನ್ನೆಲೆಯಲ್ಲಿ ದೈಹಿಕ ಶಕ್ತಿಗಿಂತ ಮನಸ್ಸಿನ ಯುಕ್ತಿಯೇ ಶ್ರೇಷ್ಠ ಎಂಬುದೇ ಈ ಗಾದೆಯ ಅರ್ಥವಾಗಿದೆ.


2. ಕೈ ಕೆಸರಾದರೆ ಬಾಯಿ ಮೊಸರು
ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು. ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ.
ಈ ಗಾದೆಯು ಕಷ್ಟಪಡದೇ ಸುಖ ಸಿಗುವುದಿಲ್ಲ ಎಂಬುದನ್ನು ಧ್ವನಿಪೂರ್ಣವಾಗಿ ಹೇಳುತ್ತದೆ. ಕೈ ಕೆಸರಾಗುವುದು ದುಡಿಮೆಯನ್ನು ಸಂಕೇತಿಸಿದರೆ ಮೊಸರು ಎಂಬುದು ಅದರ ಪ್ರತಿಫಲವನ್ನು ಬಿಂಬಿಸುತ್ತದೆ. ಬಸವಣ್ಣನವರ 'ಕಾಯಕವೇ ಕೈಲಾಸ' ಎಂಬ ಮಾತು ಮೇಲಿನ ಗಾದೆಯನ್ನು ಪುಷ್ಟಿಕರೀಸುತ್ತದೆ.


3. ಹೆತ್ತತಾಯಿ ಹೊತ್ತನಾಡು ಸ್ವರ್ಗಕ್ಕಿಂತ ಮಿಗಿಲು.
ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು. ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ.
ಪ್ರಸ್ತುತ ಗಾದೆ 'ಹೆತ್ತತಾಯಿ ಹೊತ್ತನಾಡು ಸ್ವರ್ಗಕ್ಕಿಂತ ಮಿಗಿಲು' ಎಂಬುದು ಒಂದು ಜನಪ್ರಿಯ ಗಾದೆಯಾಗಿದೆ. ತಾಯಿ ನಮ್ಮನ್ನು ಒಂಬತ್ತು ತಿಂಗಳು ತನ್ನ ಗರ್ಭದಲ್ಲಿಟ್ಟುಕೊಂಡು ಪೋಷಿಸಿದರೆ, ಹೊತ್ತನಾಡು ನಮ್ಮನ್ನು ಜೀವನಪೂರ್ತಿ ತನ್ನ ಮಡಿಲಲ್ಲಿಟ್ಟು ಪೋಷಿಸುತ್ತದೆ. ಹೆತ್ತತಾಯಿಯ ಮಡಿಲಿನಲ್ಲಿ ದೊರಕುವ ಸುಖಕ್ಕೆ ಸಮನಾದ ಸುಖ ಬೇರೊಂದಿಲ್ಲ. ಅದೇ ರೀತಿ ಜನ್ಮಭೂಮಿಯ ಸಂಬಂಧವು ಸಹ ಬಿಡಿಸಲಾಗದಂತಹುದು. ನಮ್ಮ ನಾಡಿನಲ್ಲಿ ನಮಗೆ ದೊರೆಯುವ ಆನಂದ ಮತ್ತೆ ಎಲ್ಲೂ ದೊರೆಯಲು ಸಾಧ್ಯವಿಲ್ಲ. ಆದ್ದರಿಂದ ಹೆತ್ತತಾಯಿ ಹೊತ್ತನಾಡು ಸ್ವರ್ಗಕ್ಕಿಂತ ಮಿಗಿಲಾದುದು. ರಾಮಾಯಣ ಮಹಾಕಾವ್ಯದಲ್ಲಿ ಶ್ರೀರಾಮನು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ
.
 

4. ಬೆಳೆಯುವ ಸಿರಿ ಮೊಳಕೆಯಲ್ಲಿ  
ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು.ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ.
ಬೆಳೆಯುವ ಸಸಿಯನ್ನು ನೋಡಿದಾಗಲೇ ಅದು ಮುಂದೆ ಎಂತಹ ಬೆಳೆಯನ್ನು ಕೊಡುತ್ತದೆ ಎಂಬುದು ತಿಳಿಯುತ್ತದೆ. ಹಾಗೆಯೇ ಬಾಲ್ಯದಲ್ಲಿ ಮಕ್ಕಳ ನಡೆನುಡಿಗಳನ್ನು ಗಮನಿಸಿದರೆ ಮುಂದೆ ಅವರು ಏನಾಗುತ್ತಾರೆ ಎಂಬುದನ್ನು ಅರಿಯಬಹುದು. ಕ್ರಿಕೆಟ್ ಆಟಗಾರ ಸಚಿನ್ ಜೀವನವೇ ಇದಕ್ಕೊಂದು ಉತ್ತಮ ಉದಾಹರಣೆ.ಮೊಳಕೆ ಚೆನ್ನಾಗಿದ್ದರೆ ಬೆಳೆ ಚೆನ್ನಾಗಿರುತ್ತದೆ. ಅದೇ ರೀತಿ ಮಕ್ಕಳು ಬಾಲ್ಯದಲ್ಲಿ ಉತ್ತಮ ಗುಣಗಳನ್ನು ಬೆಳೆಸಿಕೊಂಡರೆ ಮುಂದೆ ಅವರು ಉತ್ತಮ ವ್ಯಕ್ತಿಗಳಾಗುತ್ತಾರೆ ಎಂಬುದೇ ಈ ಗಾದೆಯ ಅರ್ಥವಾಗಿದೆ.


5. ಮಾತೇ ಮುತ್ತು; ಮಾತೇ ಮೃತ್ಯು.
ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು. ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ.
ಮನುಷ್ಯನಿಗೆ ಮಾತೇ ಮುಖ್ಯವಾದುದು. ಮಾತಿನಿಂದ ನಮಗೆ ಎಲ್ಲವೂ ದೊರೆಯುತ್ತದೆ. ಬಸವಣ್ಣನವರು 'ನುಡಿದರೆ ಮುತ್ತಿನ ಹಾರದಂತಿರಬೇಕು' ಎಂದಿದ್ದಾರೆ. ನಯವಿನಯದಿಂದ ಮಾತನಾಡಿದರೆ ಜಗತ್ತನ್ನೇ ಗೆಲ್ಲಬಹುದು. ಹಾಗೆಯೇ ಮಾತಿನಿಂದ ದ್ವೇಷ ವಿರಸಗಳು ಉಂಟಾಗುತ್ತವೆ. ಕೊನೆಗೆ ಮೃತ್ಯುವು ಬರಬಹುದು. 'ಮಾತು ಬಲ್ಲವನಿಗೆ ಜಗಳವಿಲ್ಲ' ಎಂಬ ಗಾದೆಯೂ ಮೇಲಿನ ಗಾದೆಗೆ ಪೂರಕವಾಗಿದೆ. ಆದ್ದರಿಂದ ನಾವು ಸಮಯೋಚಿತವಾಗಿ ಎಚ್ಚರಿಕೆಯಿಂದ ಮಾತನಾಡಬೇಕು ಎಂಬುದೇ ಇದರ ಅರ್ಥವಾಗಿದೆ.

ವಿಜ್ಞಾನಿ ಸರ್‌ ಜಗದೀಶ್‌ ಚಂದ್ರ ಬೋಸ್‌ ಅವರ ಜನ್ಮದಿನದಂದು ಗೌರವ ನಮನಗಳು:*

 * ನವ್ಹಂಬರ 30-ವಿಜ್ಞಾನ ಲೋಕದಲ್ಲಿ ಅಪ್ರತಿಮ ಕೊಡುಗೆ ನೀಡಿದ ಶ್ರೇಷ್ಠ ವಿಜ್ಞಾನಿ ಸರ್‌ ಜಗದೀಶ್‌ ಚಂದ್ರ ಬೋಸ್‌ ಅವರ ಜನ್ಮದಿನದಂದು ಗೌರವ ನಮನಗಳು:* ಭಾರತ ಕಂಡ ಶ್ರೇಷ್ಠ...