*ಹಿರಿಯರ ಅನುಭವದ ಕಿವಿ ಮಾತುಗಳು*...
🌿🌿🌿🌿🌿
1) ಸೋಮವಾರ ತಲೆಗೆ ಎಣ್ಣೆ ಹಚ್ಚಬೇಡ.
2) ಒಂಟಿ ಕಾಲಲ್ಲಿ ನಿಲ್ಲಬೇಡ.
3) ಮಂಗಳವಾರ ತವರಿಂದ
ಮಗಳು ಗಂಡನ ಮನೆಗೆ
ಹೋಗುವುದು ಬೇಡ.
4) ಶುಕ್ರವಾರ ಸೊಸೆಯನ್ನು ತವರಿಗೆ ಕಳಿಸುವುದು ಬೇಡ.
5) ಇಡೀ ಕುಂಬಳಕಾಯಿ
ಮನೆಗೆ ತರಬೇಡ.
6) ಮನೆಯಲ್ಲಿ ಉಗುರು
ಕತ್ತರಿಸಬೇಡ.
7) ಮಧ್ಯಾಹ್ನ ತುಳಸಿ
ಕೊಯ್ಯಬೇಡ.
8) ಹೊತ್ತು ಮುಳುಗಿದ ಮೇಲೆ ಗುಡಿಸಬೇಡ / ತಲೆ ಬಾಚ ಬೇಡ .
9) ಉಪ್ಪು ಮೊಸರು ಸಾಲ
ಕೊಡುವುದು ಬೇಡ.
10) ಬಿಸಿ ಅನ್ನಕ್ಕೆ ಮೊಸರು
ಹಾಕಬೇಡ.
11) ಊಟ ಮಾಡುವಾಗ
ಮದ್ಯೆ ಮೇಲೆ ಏಳಬೇಡ.
12) ತಲೆ ಕೂದಲು ಒಲೆಗೆ
ಹಾಕಬೇಡ.
13) ಹೊಸಿಲನ್ನು ತುಳಿದು
ದಾಟಬೇಡ.
14)ಮನೆಯಿಂದಹೊರಡುವಾಗ ಕಸ ಗುಡಿಸುವುದು ಬೇಡ.
15) ಗೋಡೆ ಮೇಲೆ ಕಾಲಿಟ್ಟು ಮಲಗಬೇಡ.
16) ರಾತ್ರಿ ಹೊತ್ತಲ್ಲಿ ಬಟ್ಟೆ
ಒಗೆಯಬೇಡ.
17) ಒಡೆದ ಬಳೆ ದರಿಸಬೇಡ.
18) ಮಲಗೆದ್ದ ಚಾಪೆ ಮಡಿಸದೆ ಬಿಡಬೇಡ.
19) ಉಗುರು ಕಚ್ಚಲು ಬೇಡ.
20) ಅಣ್ಣ,ತಮ್ಮ - ತಂದೆ,ಮಗ ಒಟ್ಟಿಗೆ ಒಂದೇ ದಿನ ಚೌರ
ಮಾಡಿಸಬಾರದು.
21) ಒಂಟಿ ಬಾಳೆಲೆ ತರಬೇಡ.
22) ಊಟ ಮಾಡಿದ ಮೇಲೆ ಕೈ ಒಣಗಿಸಬೇಡ.
23)ಮುಸಂಜೆ ಹೊತ್ತಲ್ಲಿ
ಮಲಗಬೇಡ.
24) ಕಾಲು ತೊಳೆಯುವಾಗ
ಹಿಮ್ಮಡಿ ತೊಳೆಯುವುದು ಮರೆಯಬೇಡ.
25) ಹೊಸಿಲ ಮೇಲೆ
ಕೂರಬೇಡ.
26) ತಿಂದ ತಕ್ಷಣ ಮಲಗಬೇಡ.
27) ಹಿರಿಯರ ಮುಂದೆ ಕಾಲು ಚಾಚಿ / ಕಾಲ ಮೇಲೆ ಕಾಲು ಹಾಕಿ ಕೂರಬೇಡ.
28) ಕೈ ತೊಳೆದು ನೀರನ್ನು
ಜಾಡಿಸಬೇಡಿ.
29) ರಾತ್ರಿ ಊಟದ ತಟ್ಟೆ ತೊಳೆಯದೇ ಬಿಡಬೇಡ.
30) ಎಂಜಲ ಕೈಯಲ್ಲಿ ಊಟ ಬಡಿಸಬೇಡ.
31) ಅನ್ನ, ಸಾರು, ಪಲ್ಯ ಮಾಡಿದ ಪಾತ್ರೆಗಳು, ಅದನ್ನು ಬಿಸಿ ಮಾಡಿದ ಪಾತ್ರೆಗಳಲ್ಲಿ ತಿನ್ನಬೇಡ.
32) ಪಾತ್ರೆಗಳ ಮೇಲೆ ಎಂಜಲು ಕೈ ತೊಳಿಯಬೇಡ.
33) ಮನೆಗೆ ಬಂದ ಹೆಣ್ಣು ಮಕ್ಕಳಿಗೆ, ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಟ್ಟು ಕಳುಹಿಸುವುದನ್ನು ಅಭ್ಯಾಸ ಮಾಡಿಕೊಳ್ಳಿರಿ.
34)ಹರಿದ ತೂತಾದ ಒಳ ಉಡುಪು, ಬನಿಯನ್, ಅಂಗಿ, ಪ್ಯಾಂಟು, ಚಪ್ಪಲಿ, ಶೂ, ಸಾಕ್ಸ್ ಧರಿಸಬೇಡಿ..ನಿಮಗೆ ಎಷ್ಟು ಹಣವಿದ್ದರೂ ಸಾಕಾಗುವುದಿಲ್ಲ..ಅನಾವಶ್ಯಕವಾಗಿ ಹಣ ಖರ್ಚಾಗುತ್ತದೆ
36)ಮನೆಯ ಒಳಗೆ ಚಪ್ಪಲಿ, ಶೂ ತರಬೇಡಿ.
ಹೊರಗೆ ಇಡಿರಿ. ಅದು ಹೋದರೂ ನಿಮ್ಮ ಕರ್ಮ ಕಳೆಯುತ್ತದೆ.
37) ದೇವಾಲಯ,ಮಠ, ಮಂದಿರಗಳಿಗೆ ಹೋದಾಗ ಅಕಸ್ಮಾತ್ ಚಪ್ಪಲಿ ಕಳೆದರೆ/ಬದಲಾದರೆ ನಿಮ್ಮ ಕರ್ಮ ಕಳೆಯಿತು ಎಂದು ತಿಳಿಯಿರಿ... ಬೇರೆಯವರದು ಹಾಕಿ ಕೊಂಡು ಬಂದರೆ ನೀವೇ ಬೀದಿಯಲ್ಲಿ ಹೋಗುವ ಮಾರಿಯನ್ನು ಮನೆಗೆ ಕರೆತಂದಂತೆ...!
38)ಹಸು ಕರುಗಳಿಗೆ , ಪ್ರಾಣಿಗಳಿಗೆ ಹಳಸಿದ್ದು ಹಾಕಬೇಡಿ.
39)ಹಸುಗಳಿಗೆ, ಪಶುಗಳಿಗೆ ಪಾತ್ರೆ ತೊಳೆದ ನೀರು, ಮುಸುರೆ ಹಾಕಬೇಡಿ..
40)ಒಬ್ಬರು ಹಾಕಿಕೊಂಡ ಒಡವೆ, ಬಟ್ಟೆ ಇನ್ನೊಬ್ಬರು ಬಳಸಬೇಡಿ.
41)ಪ್ರಯಾಣದಲ್ಲಿ ಅಪರಿಚಿತರಿಂದ ತಿಂಡಿ, ತಿನಿಸು, ಪಾನೀಯ ಸೇವಿಸಬೇಡಿ.
42) ಹಾಲು - ಮೊಸರು ,ಹಾಲು - ಅಡಿಗೆ ಎಣ್ಣೆ ಒಟ್ಟಿಗೆ ತರಬೇಡಿ.
43)ಶನಿವಾರ ಉಪ್ಪು, ಎಣ್ಣೆ ತರಬೇಡಿ.
44)ಅನಾವಶ್ಯಕವಾಗಿ ಹೆಚ್ಚು ಚಪ್ಪಲಿಗಳನ್ನು ಖರೀದಿಸಬೇಡಿ.
45)ಮನೆಯಲ್ಲಿ ನಿಂತಿರುವ ಗೋಡೆ ಗಡಿಯಾರ, ಕೈ ಗಡಿಯಾರ, ಹೊಲಿಗೆ ಯಂತ್ರ, ಸೈಕಲ್, ಸ್ಕೂಟರ್ ಕೂಡಲೇ ದುರಸ್ತಿ ಮಾಡಿ ಇಲ್ಲವೇ ವಿಲೇವಾರಿ ಮಾಡಿ..
47)ಭಗವಂತನಲ್ಲಿ ಏನೂ ಬೇಡಬೇಡಿ, ಬೇಡಿ ಬಿಕ್ಷುಕರಾಗ ಬೇಡಿ, ನಿಮಗೆ ಬೇಕಾದಾಗ ಸಿಕ್ಕೇ ಸಿಗುತ್ತದೆ.
48)ಅರ್ಹರಿಗೆ ದಾನ ಮಾಡಿ, ನಿಮ್ಮ ದಾನ ಗುಪ್ತವಾಗಿ ಇರಲಿ.
49)ಮಠ ಮಂದಿರಗಳ ಸ್ವತ್ತು, ಹಣಕಾಸು, ಒಡವೆ ವಿಷವೆಂದು ತಿಳಿಯಿರಿ. ಅದನ್ನು ದುರುಪಯೋಗ ಮಾಡಿದರೆ ಶಿಕ್ಷೆ ನಿಮ್ಮ ಬೆನ್ನ ಹಿಂದೆ ಇರುವ ನೆರಳಿನಂತೆ ತಿಳಿಯಿರಿ..
50) ಯಾರನ್ನೂ ಅಡಿಕೊಳ್ಳಬೇಡಿ,ನಿಮ್ಮನ್ನು ಹೊಗಳಿಕೊಳ್ಳಬೇಡಿ.
51) ನೀವು,ನಿಮ್ಮ ಅಧಿಕಾರ ಶಾಶ್ವತವಲ್ಲ ಬೇರೆಯವರನ್ನು ಬೆಳೆಯಲು ಬಿಡಿ,ಅವರಿಗೆ ಗುರುವಾಗಿ.
ಮೇಲಿನ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ಬದಲಾವಣೆ ಕಾಣಿರಿ.ನಿಮ್ಮ ಮನೆಯೇ ಸ್ವರ್ಗವಾಗುತ್ತದೆ..
ವಿಶೇಷ ಸೂಚನೆ : *ಮಹಾಮಾರಿ ಕೊರೊನಾ ದಿಂದ ಭಯ ಬೇಡ ಎಚ್ಚರಿಕೆ ಇರಲಿ ಹಾಗೂ ಮಾಸ್ಕ್ ಧರಿಸಿ ಸ್ಯಾನಿಟೈಜರ್ ಬಳಸಿ ಸಾಮಾಜಿಕ ಅಂತರ ಇರಲಿ ಆರೋಗ್ಯವನ್ನು ಕಾಪಾಡಿಕೊಳ್ಳಿರಿ*
💐💐💐🙏🙏🙏
ಶ್ರೀ ಡಿ ವಾಯ್ ಕಂಬಳಿ ಸ.ಶಿ
ಸ.ಹಿ.ಪ್ರಾ.ಹೆ.ಶಾಲೆ ನಂ 3 ಬೆಟಗೇರಿ-ಗದಗ
👍ಶುಭವಾಗಲಿ👍