*ನವ್ಹಂಬರ 30-ವಿಜ್ಞಾನ ಲೋಕದಲ್ಲಿ ಅಪ್ರತಿಮ ಕೊಡುಗೆ ನೀಡಿದ ಶ್ರೇಷ್ಠ ವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್ ಅವರ ಜನ್ಮದಿನದಂದು ಗೌರವ ನಮನಗಳು:*
ಭಾರತ ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲಿ ಜಗದೀಶ್ ಚಂದ್ರ ಬೋಸ್ ಒಬ್ಬ ಅಸಮಾನ್ಯ ವ್ಯಕ್ತಿ.ಅವರು ಒಬ್ಬ ಬಹುಮುಖ ಪ್ರತಿಭೆಯ ಬಂಗಾಲಿ ಮೂಲದ ಭೌತಶಾಸ್ತ್ರ ಹಾಗು ಜೀವಶಾಸ್ತ್ರ ವಿಜ್ಞಾನಿ. ರೇಡಿಯೊ, ದೂರಸಂಪರ್ಕ, ಪ್ರಕಾಶ ಶಾಸ್ತ್ರ, ಸಸ್ಯ ಜೀವಶಾಸ್ತ್ರ ಹೀಗೆ ಅನೇಕ ವಿಜ್ಞಾನದ ವಿಭಾಗದಲ್ಲಿ ಸಂಶೋಧನೆ ನೆಡೆಸಿದ್ದ ಬೋಸರು ಅವರ ಕಾಲದ ಶ್ರೇಷ್ಠ ವಿಜ್ಞಾನಿಗಳಲ್ಲೊಬ್ಬರಾಗಿದ್ದರು. ಬೋಸರು ಸಸ್ಯಗಳು, ಸಹ ಪ್ರಾಣಿಗಳ ಹಾಗೆ ಹೊರ ಪ್ರಭಾವಗಳಿಗೆ ಸ್ಪಂದಿಸುತ್ತವೆಂದು ಜಗತ್ತಿಗೆ ಸಾಬೀತು ಮಾಡಿ ತೊರಿಸಿದವರು. ಭಾರತ ಉಪಖಂಡದಲ್ಲಿ ಪ್ರಯೋಗ ವಿಜ್ಞಾನಕ್ಕೆ ಅಡಿಪಾಯ ಹಾಕಿದವರು ಇವರು. ರೇಡಿಯೋ ವಿಜ್ಞಾನದ ತಂದೆ ಎಂದೂ, ಬೆಂಗಾಲಿ ವಿಜ್ಞಾನ ಸಾಹಿತ್ಯದ ತಂದೆ ಎಂದೂ ಇವರನ್ನು ಪರಿಗಣಿಸಲಾಗುತ್ತದೆ. ತಮ್ಮ ಸಂಶೋಧನೆಗಳಿಗೆ ನೆರವಾಗುವಂತಹ ಅನೇಕ ಉಪಕರಣಗಳನ್ನು (ಕ್ರೆಸ್ಕೊಗ್ರಾಫ್ ಹಾಗು ಕೊಹೆರರ್) ತಾವೇ ಸ್ವತಃ ಕಂಡುಹಿಡಿದಿದ್ದರು. ಅಮೇರಿಕದ ಪೇಟೆಂಟ್ ತೆಗೆದುಕೊಂಡವರಲ್ಲಿ ಭಾರತೀಯ ಉಪಖಂಡದ ಮೊದಲಿಗರು. ಇದು ಆದದ್ದು 1904 ರಲ್ಲಿ.
ಬೋಸ್ ಅವರು ಭಾರತದ ಬಂಗಾಳ ಪ್ರಾಂತ್ಯದಲ್ಲಿರುವ ಮೈಮನಸಿಂಗ್ ಎಂಬ ಈಗಿನ ಬಾಂಗ್ಲಾದೇಶಕ್ಕೆ ಸೇರಿದ ಪ್ರಾಂತ್ಯದಲ್ಲಿ ನವ್ಹಂಬರ 30, 1858 ರಂದು ಜನಿಸಿದರು. ತಂದೆ ಭಗವಾನಚಂದ್ರರು ಫರೀದಪುರದಲ್ಲಿ ಉಪವಿಭಾಗಾಧಿಕಾರಿಗಳಾಗಿದ್ದರು. ತಾಯಿ ಸಾಂಪ್ರದಾಯಿಕ ಗೃಹಿಣಿ, ವಿಶಾಲ ಮನೋಭಾವದ ಮಹಿಳೆ. ಜಗದೀಶಚಂದ್ರರೇ ಮುಂದೆ ಬರೆದಂತೆ ತಾವು ಶಾಲಾ ಬಾಲಕರಾಗಿದ್ದಾಗ ಅಸ್ಪೃಶ್ಯಕುಲದ ತಮ್ಮ ಗೆಳೆಯರನ್ನು ಮನೆಗೆ ಕರೆದುಕೊಂಡು ಹೋದಾಗ ಅವರ ತಾಯಿ ಯಾವ ಭೇದವನ್ನು ಮಾಡದೆ ಮಾತೆಯ ಮಮತೆ ತೋರುತ್ತಿದ್ದರಂತೆ. ಜಗದೀಶಚಂದ್ರರಿಗೆ ಒಬ್ಬ ಅಕ್ಕ ಮತ್ತು ನಾಲ್ಕು ತಂಗಿಯರು. ತಂದೆ ಭಗವಾನಚಂದ್ರರಿಗೆ ಭಾರತೀಯ ಸಂಪ್ರದಾಯ ಸಂಸ್ಕೃತಿಗಳಲ್ಲಿ ಅಪಾರ ಗೌರವ ಮತ್ತು ವಿಶ್ವಾಸ. ಆಗಿನ ವಾತಾವರಣದಲ್ಲಿ ಶ್ರೀಮಂತರು ಮತ್ತು ಅಧಿಕಾರಿಗಳು ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುವುದು ಪ್ರತಿಷ್ಠೆಯ ಕುರುಹಾಗಿತ್ತು. ಆದರೆ ಭಗವಾನಚಂದ್ರರು ಹೀಗಲ್ಲ. ಸ್ವತಃ ಶಿಕ್ಷಣತಜ್ಞರೂ ಆಗಿದ್ದು ಔದ್ಯಮಿಕ ಮತ್ತು ತಾಂತ್ರಿಕ ಶಾಲೆಗಳನ್ನು ಸ್ಥಾಪಿಸಿದ್ದ ಇವರು ತಮ್ಮ ಮಗ ಮಾತೃಭೂಮಿಯ ನಿಜವಾದ ಪರಿಚಯ ಮಾಡಿಕೊಳ್ಳಲೆಂಬ ಘನ ಉದ್ದೇಶದಿಂದ ಈತನನ್ನು ಸನಾತನ ಮಾದರಿಯ ಒಂದು ಪಾಠಶಾಲೆಗೆ ಸೇರಿಸಿದರು. ತಂದೆಯವರ ಈ ನಿರ್ಣಯ ಮುಂದೆ ತಮ್ಮಲ್ಲಿ ರಾಷ್ಟ್ರೀಯ ಭಾವನೆ ಬೆಳೆಯಲು ಕಾರಣವಾಯಿತೆಂದು ಜಗದೀಶಚಂದ್ರರು ಉದ್ಧರಿಸಿದ್ದಾರೆ. ಆ ಶಾಲೆಯಲ್ಲಿಯೇ ಅವರಿಗೆ ನಿಸರ್ಗದ ಆಕರ್ಷಣೆ ಹುಟ್ಟಿತು. ಜೀವ ಅಜೀವಿಗಳ ವ್ಯವಹಾರಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸುವ ಪ್ರವೃತ್ತಿ ಹೀಗೆ ಬಾಲ್ಯದಲ್ಲಿಯೇ ಬೆಳೆಯಿತು. ಆಗ ಅವರ ಮೇಲೆ ವಿಶೇಷ ಬೀರಿದ ವ್ಯಕ್ತಿಯೆಂದರೆ ಅವರ ತಂದೆಯೇ. ಸೆರೆಮನೆಯಿಂದ ಬಿಡುಗಡೆಯಾಗಿ ಬಂದಿದ್ದ ಒಬ್ಬ ಭಾರೀ ಡಕಾಯಿತನನ್ನು ಮಗು ಜಗದೀಶನ ಯೋಗಕ್ಷೇಮ ನೋಡಿಕೊಳ್ಳಲು ನಿಯಮಿಸಿ ಆ ಡಕಾಯಿತನನ್ನು ಸುಧಾರಿಸಿದ ಅಸಾಧಾರಣ ವ್ಯಕ್ತಿ ಭಗವಾನಚಂದ್ರರು.
*ಅವರಿಗೆ ಲೀಗ್ ಆಫ್ ನೇಶನ್ಸ್ ಕಮಿಟಿ ಆಫ್ ಇಂಟಲೆಕ್ಚುಯಲ್ ಕೋಪರೇಶನ್ ಸದಸ್ಯತ್ವ ಗೌರವವವೂ ಸಂದಿತು.
*ಬೋಸ್ ಅವರನ್ನು ಪ್ರಸಕ್ತದಲ್ಲಿ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಎಂದಾಗಿರುವ ಅಂದಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಸ್ ಇಂಡಿಯಾದ ಸಂಸ್ಥಾಪಕ ಫೆಲೋ ಎಂದು ಗೌರವಿಸಲಾಗಿತ್ತು.
*ದಿ ಇಂಡಿಯನ್ ಬೊಟಾನಿಕ್ ಗಾರ್ಡನ್ ಅನ್ನು ಜೂನ್ 25, 2009 ರ ವರ್ಷದಂದು ಆಚಾರ್ಯ ಜಗದೀಶ್ ಚಂದ್ರ ಬೋಸ್ ಇಂಡಿಯನ್ ಬೊಟಾನಿಕ್ ಗಾರ್ಡನ್ ಎಂದು ಹೆಸರಿಸಲಾಯಿತು.
ತಮ್ಮ ಜೀವನದುದ್ದಕ್ಕು ಜ್ಞಾನ ಹಾಗು ವಿಜ್ಞಾನದ ಸಮ್ಮಿಲನದ ಅನೇಕ ಸಾಧನೆ ಮಾಡಿದ ಶ್ರೇಷ್ಠ ವ್ಯಕ್ತಿ.ನವೆಂಬರ್ 23, 1937 ರಂದು ಜಗದೀಶ್ಚಂದ್ರ ಬೋಸರು ನಿಧನರಾದರು.
ಇಂತಹ ಬಹುಮುಖ ಪ್ರತಿಭೆ ಅಪ್ರತಿಮ ವಿಜ್ಞಾನ ಜಗದೀಶ್ ಚಂದ್ರ ಬೋಸ್ ರವರಿಗೆ ಭಾರತೀಯರೆಲ್ಲರ ನಮನಗಳು.
*#ಸಂಗ್ರಹಿಸಿದ್ದು ಬಿ ಎಮ್ ಯರಗುಪ್ಪಿ ಬಿ ಆರ್ ಪಿ ಶಿರಹಟ್ಟಿ*
#BirthAnniversary