ಶ್ರೀ M K ಹುಯಿಲಗೋಳ ಶಿಕ್ಷಕರು ಗದಗ, ಇವರ ಲೇಖನ
ವಿಶ್ವ ಜಲದಿನದ ಮಹತ್ವ
ಶ್ರೀ R S PATIL ಶಿಕ್ಷಕರ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ
ಶ್ರೀ M K ಹುಯಿಲಗೋಳ ಶಿಕ್ಷಕರು ಗದಗ, ಇವರ ಲೇಖನ
ವಿಶ್ವ ಜಲದಿನದ ಮಹತ್ವ
ಶ್ರೀ R S PATIL ಶಿಕ್ಷಕರ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ
1. ಶಕ್ತಿಗಿಂತ ಯುಕ್ತಿ ಮೇಲು
ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು. ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ.
ಪ್ರಸ್ತುತ ಗಾದೆ 'ಶಕ್ತಿಗಿಂತ ಯುಕ್ತಿ ಮೇಲು' ಎಂಬುದು ಒಂದು ಜನಪ್ರಿಯ ಗಾದೆ. ಶಕ್ತಿ ದೈಹಿಕವಾದದ್ದು. ಯುಕ್ತಿ ಬುದ್ಧಿಚಾತುರ್ಯವನ್ನು ಅವಲಂಬಿಸಿದೆ. ಶಕ್ತಿಯಿಂದ ಗೆಲ್ಲಲಾಗದ ಸಂದರ್ಭದಲ್ಲಿ ಯುಕ್ತಿಯನ್ನು ಪ್ರಯೋಗಿಸಬೇಕು. ತನ್ನ ಜೀವ ಉಳಿಸಿಕೊಳ್ಳಲು ಮೊಲವೊಂದು ಸಿಂಹದಿಂದ ತನ್ನನ್ನು ತಾನು ಯುಕ್ತಿಯಿಂದ ಕಾಪಾಡಿಕೊಂಡ ಪಂಚತಂತ್ರದ ಕಥೆ ಎಲ್ಲರಿಗೂ ತಿಳಿದಿದೆ. ಈ ಹಿನ್ನೆಲೆಯಲ್ಲಿ ದೈಹಿಕ ಶಕ್ತಿಗಿಂತ ಮನಸ್ಸಿನ ಯುಕ್ತಿಯೇ ಶ್ರೇಷ್ಠ ಎಂಬುದೇ ಈ ಗಾದೆಯ ಅರ್ಥವಾಗಿದೆ.
2. ಕೈ ಕೆಸರಾದರೆ ಬಾಯಿ ಮೊಸರು
ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು. ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ.
ಈ ಗಾದೆಯು ಕಷ್ಟಪಡದೇ ಸುಖ ಸಿಗುವುದಿಲ್ಲ ಎಂಬುದನ್ನು ಧ್ವನಿಪೂರ್ಣವಾಗಿ ಹೇಳುತ್ತದೆ. ಕೈ ಕೆಸರಾಗುವುದು ದುಡಿಮೆಯನ್ನು ಸಂಕೇತಿಸಿದರೆ ಮೊಸರು ಎಂಬುದು ಅದರ ಪ್ರತಿಫಲವನ್ನು ಬಿಂಬಿಸುತ್ತದೆ. ಬಸವಣ್ಣನವರ 'ಕಾಯಕವೇ ಕೈಲಾಸ' ಎಂಬ ಮಾತು ಮೇಲಿನ ಗಾದೆಯನ್ನು ಪುಷ್ಟಿಕರೀಸುತ್ತದೆ.
3. ಹೆತ್ತತಾಯಿ ಹೊತ್ತನಾಡು ಸ್ವರ್ಗಕ್ಕಿಂತ ಮಿಗಿಲು.
ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು. ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ.
ಪ್ರಸ್ತುತ ಗಾದೆ 'ಹೆತ್ತತಾಯಿ ಹೊತ್ತನಾಡು ಸ್ವರ್ಗಕ್ಕಿಂತ ಮಿಗಿಲು' ಎಂಬುದು ಒಂದು ಜನಪ್ರಿಯ ಗಾದೆಯಾಗಿದೆ. ತಾಯಿ ನಮ್ಮನ್ನು ಒಂಬತ್ತು ತಿಂಗಳು ತನ್ನ ಗರ್ಭದಲ್ಲಿಟ್ಟುಕೊಂಡು ಪೋಷಿಸಿದರೆ, ಹೊತ್ತನಾಡು ನಮ್ಮನ್ನು ಜೀವನಪೂರ್ತಿ ತನ್ನ ಮಡಿಲಲ್ಲಿಟ್ಟು ಪೋಷಿಸುತ್ತದೆ. ಹೆತ್ತತಾಯಿಯ ಮಡಿಲಿನಲ್ಲಿ ದೊರಕುವ ಸುಖಕ್ಕೆ ಸಮನಾದ ಸುಖ ಬೇರೊಂದಿಲ್ಲ. ಅದೇ ರೀತಿ ಜನ್ಮಭೂಮಿಯ ಸಂಬಂಧವು ಸಹ ಬಿಡಿಸಲಾಗದಂತಹುದು. ನಮ್ಮ ನಾಡಿನಲ್ಲಿ ನಮಗೆ ದೊರೆಯುವ ಆನಂದ ಮತ್ತೆ ಎಲ್ಲೂ ದೊರೆಯಲು ಸಾಧ್ಯವಿಲ್ಲ. ಆದ್ದರಿಂದ ಹೆತ್ತತಾಯಿ ಹೊತ್ತನಾಡು ಸ್ವರ್ಗಕ್ಕಿಂತ ಮಿಗಿಲಾದುದು. ರಾಮಾಯಣ ಮಹಾಕಾವ್ಯದಲ್ಲಿ ಶ್ರೀರಾಮನು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ.
ಪ್ರತಿ ವರ್ಷ ಫೆಬ್ರವರಿ ೨೮ನೇ ದಿನಾಂಕವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶ. ಉಪನ್ಯಾಸಗಳು, ಚರ್ಚಾಸ್ಪರ್ಧೆಗಳು, ರಸಪ್ರಶ್ನೆ, ವಸ್ತುಪ್ರದರ್ಶನ - ಹೀಗೆ ಅನೇಕ ಚಟುವಟಿಕೆಗಳನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂದರ್ಭದಲ್ಲಿ ದೇಶದ ವಿವಿಧೆಡೆ ಹಮ್ಮಿಕೊಳ್ಳಲಾಗುತ್ತದೆ. ಪ್ರತೀ ವರ್ಷ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಚಟುವಟಿಕೆಗಳನ್ನು ಒಂದು ನಿರ್ದಿಷ್ಟ ವಿಷಯದ ಸುತ್ತ ಆಯೋಜಿಸಲಾಗುತ್ತದೆ.
* ನವ್ಹಂಬರ 30-ವಿಜ್ಞಾನ ಲೋಕದಲ್ಲಿ ಅಪ್ರತಿಮ ಕೊಡುಗೆ ನೀಡಿದ ಶ್ರೇಷ್ಠ ವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್ ಅವರ ಜನ್ಮದಿನದಂದು ಗೌರವ ನಮನಗಳು:* ಭಾರತ ಕಂಡ ಶ್ರೇಷ್ಠ...