ಯುಗಾದಿ ಕವಿತೆ
- ದ.ರಾ.ಬೇಂದ್ರೆಯವರ ಯುಗಾದಿ ಬಗೆಗಿನ ಈ ಕವಿತೆ ಸುಪ್ರಸಿದ್ಧವಾದುದು.
"ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತ್ತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ
ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ
ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ"||ಯುಗ ಯುಗಾದಿ ಕಳೆದರು
🌳🌴🌾🌿🍀☘️🌻🌷🙏🏻🙏🏻🙏🏻🙏🏻🙏🏻🙏🏻🙏🏻🙏🏻ಆತ್ಮೀಯ ಸ್ನೇಹಿತರೆ /ಹಿರಿಯರೆ ,ತಮ್ಮೆಲ್ಲರಿಗೆ ಚೈತ್ರ ಕಾಲ ಆರಂಭದ, ಪ್ಲವನಾಮ ಸಂವತ್ಸರದ ಪ್ರಾರಂಭದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು .ಪ್ರಕೃತಿಯಲ್ಲಿನ ಗಿಡಮರಗಳು ಹೊಸಚಿಗುರಿನೊಂದಿಗೆ ನವ ಮನ್ವಂತರಕ್ಕೆ ನಾಂದಿ ಹಾಡುವ ಈ ಸಮಯ, ನಮ್ಮೆಲ್ಲರ ಬಾಳಲ್ಲಿ ಹೊಸತನ ಮೂಡಲಿ, ಹೊಸ ವರ್ಷ ಎಲ್ಲರಿಗೂ ಸಂಭ್ರಮ, ಸಂತೋಷ ಉಂಟುಮಾಡಲಿ ಎಂದು ದೇವರಲ್ಲಿ ಪ್ರಾರ್ಥನೆ.
ಇಂತಿ
ಶ್ರೀ ದೇವಪ್ಪ ಯ ಕಂಬಳಿ.
ಉಪಾಧ್ಯಕ್ಷರು
ಕ ರಾ ಸ ಅಂಗವಿಕಲ ನೌಕರರ ಸಂಘ, ಗದಗ ಜಿಲ್ಲಾ ಘಟಕ
🪔🪔🪔🪔🪔🪔🪔🪔🌞
No comments:
Post a Comment